ಸುರಕ್ಷತಾ ಕ್ರಮಗಳು
ಗೃಹಬಳಕೆದಾರರಿಗೆ
ಮಾಡಿ 
- ಪ್ಲಗ್ ಬಿಂದುವಿನಿಂದ ಸಂಪರ್ಕ ಪಡೆಯಲು ಗುಣಮಟ್ಟದ ಪಿನ್ನನ್ನು ಬಳಸಿ.
- ಅನುಮೋದಿತ ಗುಣಮಟ್ಟದ ಮತ್ತು ಐ.ಎಸ್.ಐ. ಗುರುತಿನ ವಯರ್ಗಳು/ಸ್ವಿಚ್ ಗಳು/ಕೇಬಲ್ಗಳನ್ನೇ ಯಾವಾಗಲೂ ಬಳಸಿ.
- ಸ್ವಿಚ್ ಆರಿಸಿದ ಬಳಿಕವಷ್ಟೇ ಉಪಯೋಗಿಸಲ್ಪಟ್ಟ ಬಲ್ಬ್ಗಳನ್ನು ಬದಲಾಯಿಸಿ.
- ದೀಪದ ಎಲ್ಲಾ ಹಿಡಿಕೆಗಳು ದೀಪದೊಂದಿಗೇ ಇರಲಿ.
- ಇಸ್ತ್ರಿ ಪೆಟ್ಟಿಗೆಗಳು ಮತ್ತು ಗೀಸರುಗಳ ಸಂಪರ್ಕಕ್ಕೆ ಸರಿಯಾದ ರೀತಿಯಲ್ಲಿ ಭೂಸಂಪರ್ಕ ನೀಡಿರುವ ತ್ರೀಪಿನ್ ಪ್ಲಗ್ಗಳನ್ನು ಉಪಯೋಗಿಸಿ.
- ಯಾವಾಗಲೂ ಐ.ಎಸ್.ಐ. ಗುರುತಿನ ವಿದ್ಯುತ್ ಉಪಕರಣಗಳು/ಸಲಕರಣೆಗಳನ್ನು ಖರೀದಿಸಿ/ಬಳಸಿ ಮತ್ತು ಕೈಪಿಡಿಯಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
- ಹೊರೆಯನ್ನು ಮಿತಿಯಲ್ಲಿಡಲು ಯೋಗ್ಯ ಎಂಸಿಬಿಯನ್ನು ಬಳಸಿ.
- ಪ್ರಾಣಾಂತಿಕ ಶಾಕ್ ತಪ್ಪಿಸಲು ಇಎಲ್ಸಿಬಿ/ಆರ್ಸಿಸಿಬಿಯೊಂದನ್ನು ಅಳವಡಿಸಿ.
- ಯೋಗ್ಯ ಗುಣಮಟ್ಟದ ಫ್ಯೂಸನ್ನೇ ಯಾವಾಗಲೂ ಒದಗಿಸಿ.
- ಪ್ಲಗ್/ಸಾಕೆಟ್ಗಳು ಮಕ್ಕಳ ಕೈಗೆಟಕದಂತೆ ಯಾವತ್ತೂ ಖಚಿತಪಡಿಸಿಕೊಳ್ಳಿ.
- ಮಣ್ಣಿನ ಪ್ರತಿರೋಧ ಕಡಿಮೆ ಮಾಡುವ ನಿಟ್ಟಿನಲ್ಲಿ ಭೂಸಂಪರ್ಕ ವಿದ್ಯುದ್ವಾರಕ್ಕೆ ಅಗಾಗ್ಗೆ ನೀರು ಒದಗಿಸಿ.
- ಭೂಸಂಪರ್ಕ ನಿರಂತರವಾಗಿರಲು ಭೂ ಸೀಸ ಮತ್ತು ಮಣ್ಣಿನ ಪ್ರತಿರೋಧವನ್ನು ನಿಯತಕಾಲದಲ್ಲಿ ಪರೀಕ್ಷಿಸಿ.
- ವಿದ್ಯುತ್ ಉಪಕರಣಗಳ ಮಾದರಿ ಮತ್ತು ಅಳವಡಿಸುವ ಸ್ಥಳದ ಬಗ್ಗೆ ವಿದ್ಯುತ್ ಇಂಜಿನಿಯರ್ರಿಂದ/ತಜ್ಞರಿಂದ ಸಲಹೆ ಪಡೆಯಿರಿ.
- ಸರ್ಕಾರದಿಂದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಕೆಲಸಗಳನ್ನು ಮಾಡಿಸಿ.
- ದುರಸ್ತಿ ಮತ್ತು ಪರೀಕ್ಷೆಗಾಗಿ ಯಾವಾಗಲೂ ಪ್ರಮಾಣೀಕೃತ ವಿದ್ಯುತ್ ಕೆಲಸಗಾರನ್ನು ಪಡೆಯಿರಿ.
- ವಿದ್ಯುತ್ ಉಪಕರಣಗಳ ಕೆಲಸ ನಿರ್ವಹಿಸುವಾಗ ರಬ್ಬರ್ ಕೈಚೀಲಗಳನ್ನು ಬಳಸಿ.
- ವಿದ್ಯುತ್ ಉಪಕರಣಗಳ ಕೆಲಸ ನಿರ್ವಹಿಸುವಾಗ ರಬ್ಬರ್ ಚಾಪೆಗಳನ್ನು ಬಳಸಿ.
- ವಿದ್ಯುತ್ ವಯರ್ಗಳು ಮತ್ತು ಸಾಧನ ಸಾಮಾನುಗಳನ್ನು ನಿರ್ವಹಿಸುವಾಗ ಪೂರ್ತಿ ವಿದ್ಯುತ್ ನಿರೋಧಕ ಹೊಂದಿರುವ ಉಪಕರಣಗಳನ್ನು ಉಪಯೋಗಿಸಿ.
- ಬರಿಯ ಅಂಶದ ವಿದ್ಯುತ್ ಸಂಪರ್ಕಗಳನ್ನು ಒಳ್ಳೆ ಗುಣಮಟ್ಟದ ವಿದ್ಯುತ್ ನಿರೋಧಕಗಳಿಂದ ರಕ್ಷಾಕವಚ ಹಾಕಿ.
- ಸಡಿಲ ಸಂಪರ್ಕಗಳಿಂದ ಮತ್ತು ತದನಂತರ ಬಿಸಿಯಾಗಿ ಕರಗುವುದನ್ನು ತಪ್ಪಿಸಲು ಪರಸ್ಪರ ಹೊಂದಿಕೆಯಾಗುವ ಪ್ಲಗ್ ಮತ್ತು ಸಾಕೆಟ್ಗಳ ಯಾವಾಗಲೂ ಖಚಿತಪಡಿಸಿಕೊಂಡಿರಿ.
- ಮೇಲ್ಮೈಯನ್ನು ಶುಚಿಗೊಳಿಸಿ. ಪ್ರತೀ 2-3 ವರ್ಷಗಳಿಗೊಮ್ಮೆ ಸಾಕೆಟ್ನ್ನು ಬದಲಾಯಿಸಿ.
- ವಿದ್ಯುತ್ ಅಪಘಾತವಾದರೆ ಕೂಡಲೇ ಮೆಸ್ಕಾಂಗೆ, ಪೋಲೀಸರಿಗೆ ಮತ್ತು ವಿದ್ಯುತ್ ಪರಿವೀಕ್ಷರಿಗೆ ತಿಳಿಸಿ.
- ವಾಲಿದ ಕಂಬಗಳ ಬಗ್ಗೆ ಮತ್ತು ಭೂಮಟ್ಟದ ತೀರುವಳಿ ಸಾಕಷ್ಟಿಲ್ಲದ ಬಗ್ಗೆ ಮೆಸ್ಕಾಂಗೆ ತಕ್ಷಣ ತಿಳಿಸಿ.
- ಸ್ಥಾವರದಲ್ಲಿ ವಿದ್ಯುತ್ ಸೋರಿಕೆÀ ಇದ್ದಲ್ಲಿ ಮೆಸ್ಕಾಂ ಕಛೇರಿಗೆ ತಿಳಿಸಿ.
- ಯಾವಾಗಲೂ ಹೀಟರ್ ಮತ್ತು ಬಾಯ್ಲರ್ಗಳಿಗೆ ಕ್ರಮವಾಗಿ ಸಿಮ್ಮರ್ ಸ್ಟಾಟ್ ಮತ್ತು ಥರ್ಮೊಸ್ಟಾಟ್ಗಳನ್ನು ಉಪಯೋಗಿಸಿ.
- ಯಾವುದಾದರೂ ದುರಸ್ತಿ ಕೆಲಸ ನಡೆಸಬೇಕಾದ ವಿದ್ಯುತ್ ಸರಬರಾಜಿನ ಸ್ವಿಚ್ನ್ನು ಆರಿಸಿ ಬಿಡಿ.
- ಮೈನ್ ಸ್ವಿಚ್ಚನ್ನು ಆರಿಸಿದ ಬಳಿಕ ಮಾತ್ರವೇ ಫ್ಯಾನ್ ಇತ್ಯಾದಿ ಉಪಕರಣಗಳನ್ನು ಪ್ರತ್ಯೇಕಿಸಿ ಗ್ರಾಹಕರೇ ನಿಯತಕಾಲಿಕವಾಗಿ ಶುಚಿಮಾಡಬಹುದು ಮತ್ತು ಗ್ರೀಸ್ ಹಚ್ಚಬಹುದು.
- ಸ್ಥಾವರಕ್ಕೆ ಮತ್ತು ಮಾಪಕಕ್ಕೆ ಪ್ರತ್ಯೇಕವಾದ ಭೂಸಂಪರ್ಕ ವಿದ್ಯುದ್ವಾರಗಳನ್ನು ಹಾಕುವುದನ್ನು ಖಚಿತಪಡಿಸಿಕೊಳ್ಳಿ.
ಮಾಡದಿರಿ 
- ಬರಿಯ ವಯರುಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯುವುದನ್ನು ತಪ್ಪಿಸಿ.
- ಬಟ್ಟೆ ಒಣಗಿಸುವ ಹಗ್ಗ ಕಟ್ಟಲು ದೀಪಗಳ ಕಂಸ ಯಾ ಆವರಣವನ್ನು ಉಪಯೋಗಿಸಬೇಡಿ.
- ಸ್ವಿಚ್ ಆನ್ ಇರುವಾಗ ಫ್ಯೂಸ್ ಹೋದ ಬಲ್ಬುಗಳನ್ನು ಬದಲಾಯಿಸುವುದು ಅಪಾಯಕಾರಿ
- ದೀಪವಿಲ್ಲದೆ ದೀಪದ ಹಿಡಿಕೆಗಳನ್ನಿಡಬೇಡಿ.
- ಕಳಪೆ ಗುಣಮಟ್ಟದ ವಿದ್ಯುತ್ ಜೋಡಣೆಯನ್ನು ಖರೀದಿಸಬೇಡಿ. ಇಂತಹ ಜೋಡಣೆಗಳಿಂದ ಅಪಘಾತವಾಗುವ ಸಂಭವವಿದೆ.
- ಮಿಕ್ಸಿಗಳು, ರಿಫ್ರಿಜರೇಟರ್ಗಳು, ಅರೆಯುವ ಯಂತ್ರಗಳು, ವಾಶಿಂಗ್ ಮೆಶಿನ್ಗಳು, ಇಸ್ತ್ರಿ ಪೆಟ್ಟಿಗೆಗಳು ಮತ್ತು ಗೀಸರ್ಗಳನ್ನು ಭೂಸಂಪರ್ಕವಿಲ್ಲದ ಪ್ಲಗ್ಪಿನ್ನಿಂದ ಸಂಪರ್ಕ ನೀಡಬೇಡಿ. ಇದರಿಂದ ತೀವ್ರ ಅಪಘಾತಗಳಾಗಬಹುದು.
- ನಿಮ್ಮ ಕೈಗಳು ಒದ್ದೆಯಾಗಿರುವಾಗ ಅಥವಾ ಗಾಯದಿಂದ ರಕ್ತ ಸೋರುತ್ತಿರುವಾಗ ವಿದ್ಯುತ್ ಸ್ವಿಚ್ ಅಥವಾ ಉಪಕರಣಗಳನ್ನು ಜೋಡಿಸಬೇಡಿ.
- ಕೇಬಲ್ಗಳನ್ನು/ಉದ್ಯಾನವನದ ದೀಪಗಳು/ದ್ವಾರದೀಪಗಳ ಕೇಬಲ್ಗಳನ್ನು ಮುಕ್ತವಾಗಿ ತೆರೆದಿಡಬೇಡಿ. ಯಾವಾಗಲೂ ಹ್ಯೂಮ್ ಪೈಪಿನೊಳಗೆ ಹಾಕಿ ಅಳವಡಿಸಿ ಮತ್ತು ಕೇಬಲ್ ಮಾರ್ಗವನ್ನು ಗುರುತು ಮಾಡಿ.
- ಟೂ ಇನ್ ವನ್ ಪ್ಲಗ್ ಮತ್ತು ಸಾಕೆಟ್ಗಳನ್ನು ಬಳಸಬೇಡಿ.
- ಒಡೆದ ಸ್ವಿಚ್ಗಳು, ಪ್ಲಗ್ಗಳು ಮತ್ತು ಸಾಕೆಟ್ಗಳನ್ನು ಬಳಸಬೇಡಿ.
- ನ್ಯೂಟ್ರಲ್ ಮತ್ತು ಅರ್ತ್ ಲೀಡನ್ನು ಒಟ್ಟುಗೂಡಿಸಬೇಡಿ. ಯಾವತ್ತೂ ಪ್ರತ್ಯೇಕ ಮತ್ತು ವಿಶಿಷ್ಟವಾದ ನ್ಯೂಟ್ರಲ್ ವಯರ್ ಮತ್ತು ಭೂಸಂಪರ್ಕ ಶರೀರವನ್ನು ಪಡೆಯಿರಿ.
- ವಾಟರ್ ಹೀಟರ್, ಗೀಸರ್, ವಿದ್ಯುತ್ ಇಸ್ತ್ರಿ ಪೆಟ್ಟಿಗೆಗಳು ಇತ್ಯಾದಿಗಳನ್ನು ಸರಿಯಾದ ಭೂಸಂಪರ್ಕವಿಲ್ಲದೆ ಉಪಯೋಗಿಸಬೇಡಿ.
- ಏನೂ ತಿಳಿಯದ ವ್ಯಕ್ತಿಗೆ ವಿದ್ಯುತ್ ವ್ಯವಸ್ಥೆ ಮತ್ತು ಉಪಕರಣಗಳನ್ನು ನಿರ್ವಹಿಸಲು ಬಿಡಬೇಡಿ.
- ಒದ್ದೆ ಕೈಯಲ್ಲಿ ವಿದ್ಯುತ್ ಉಪಕರಣಗಳ/ಸ್ವಿಚ್ಗಳ ಕಾರ್ಯ ನಡೆಸಬೇಡಿ.
- ನೀರು ಬಿಸಿ ಮಾಡಲು, ತೆರೆದ ಬಿಸಿ ಮಾಡುವ ಕಾಯಿಲನ್ನು ಬಳಸಬೇಡಿ.
- ತೆರೆದ ವಯರ್ಗಳನ್ನಾಗಲೀ/ ಜೋಡಿಸಿದ ವಯರ್ಗಳನ್ನು ಉಪಕರಣಗಳಿಗೆ ಬಳಸಬೇಡಿ.
- ಜಂಕ್ಷನ್/ಪ್ಲಗ್ ಪಾಯಿಂಟ್ನಿಂದ ಸಡಿಲವಾದ/ತೆರೆದ ವಯರಿಂಗ್ ವಿಸ್ತರಿಸಬೇಡಿ.
- ಒಂದು ಪ್ಲಗ್ಗೆ ಅಧಿಕ ಹೊರೆ ಹೇರಬೇಡಿ.
- ವಿದ್ಯುತ್ ವ್ಯವಸ್ಥೆಯನ್ನು ಹೆಚ್ಚುವರಿ ಯಾ ಅನಧಿಕೃತ ಹೊರೆ ನೀಡಿ ಅಧಿಕ ಹೊರೆಗೊಳಿಸಬೇಡಿ.
- ವಿದ್ಯುತ್ ಸರಬರಾಜಿನ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಯನ್ನು ಬರೀ ಕೈಯಲ್ಲಿ ಮುಟ್ಟಬೇಡಿ.
- ವಿದ್ಯುತ್ ಕಂಬಗಳನ್ನು/ಪ್ರಸರಣ ಗೋಪುರಗಳನ್ನು ಏರಬೇಡಿ.
- ವಿದ್ಯುತ್ ಕಂಬಕ್ಕೆ ಒರಗಿ ನಿಲ್ಲಬೇಡಿ.
- ಗೇ ವಯರ್ಗಳನ್ನು ನಿರ್ವಹಿಸಬೇಡಿ.
- ಮೇಲೆ ಹಾದು ಹೋದ ತಂತಿಗಳ ಕೆಳಗೆ ಅಥವಾ ತಂತಿಗಳ ಸಮೀಪ ಮನೆಗಳನ್ನು ಕಟ್ಟಬೇಡಿ/ಮನೆಗಳ ವಿಸ್ತರಣೆ ಮಾಡಬೇಡಿ.
- ಬರಿಯ ತಂತಿಗಳ ಬಳಿ ಕಿಟಿಕಿಗಳು ಮತ್ತು ಬಾಲ್ಕನಿಗಳಿರದಂತೆ ನೋಡಿಕೊಳ್ಳಿ.
- ಮೇಲ್ ತಂತಿಗಳ ಬಳಿ ಇರುವ ಮರದ ಗೆಲ್ಲುಗಳನ್ನು ಮೆಸ್ಕಾಂನ ಅನುಮತಿ ಇಲ್ಲದೆ ಕಡಿಯಬೇಡಿ. ಮೇಲ್ ತಂತಿಯ ಕೆಳಗೆ ಮರಗಳನ್ನು sಬೆಳೆÀಸಬೇಡಿ.
- ಬಟ್ಟೆ ಒಣಗಿಸಲು ವಿದ್ಯುತ್ ಕಂಬಗಳಿಗೆÀ ಅಳವಡಿಸಿರುವ ಜಿ.ಐ. ವಯರ್ಗಳನ್ನು ಉಪಯೋಗಿಸಬೇಡಿ.
- ವಿದ್ಯುತ್ ಸಂಪರ್ಕವಿರುವಾಗ ಫ್ಯಾನ್, ಹೀಟರ್, ಇಸ್ತ್ರಿ ಪೆಟ್ಟಿಗೆ ಮೊದಲಾದ ಉಪಕರಣಗಳನ್ನು ಒಂದು ಕಡೆಯಿಂದ ಇನ್ನೊಂದೆಡೆ ಒಯ್ಯಬೇಡಿ. ಆಗ ವಯರ್ನ ಮೇಲೆ ಒತ್ತಡ ಬಿದ್ದು ಪ್ಲಗ್ ನಿಂದ ಸಂಪರ್ಕ ತಪ್ಪಬಹುದು ಹಾಗೂ ಇದು ಗಂಭೀರ ಸ್ವರೂಪ ತಾಳಬಹುದು.
- ಉದ್ದದ ಲೋಹದ ಕೊಳವೆಗಳನ್ನು/ವಸ್ತುಗಳನ್ನು ಮೇಲ್ ತಂತಿಯ ಕೆಳಗೆ ಒಯ್ಯಬೇಡಿ.
- ಮೇಲ್ ತಂತಿಗಳ ಸಮೀಪ ಗಾಳಿಪಟಗಳ್ನು ಹಾರಿಸಬೇಡಿ.
- ತುಂಡಾದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ.
- ಒಡೆದ ಫಿಲಮೆಂಟಿಗೆ ತೇಪೆ ಹಾಕಿ ಬಲ್ಬನ್ನು ಮತ್ತೆ ಉಪಯೋಗಿಸಬೇಡಿ. ಇದು ಬಲ್ಬಿನ ಗಾಜನ್ನು ಬಿಸಿಯಾಗಿಸಿ, ಬಲ್ಬನ್ನು ಸ್ಪೋಟಗೊಳಿಸಲು ಸಾಧ್ಯವಿದೆ.
- ಅಲ್ಲಲ್ಲಿ ಜೋಡಿಸಿದ ವಯರ್ಗಳನ್ನು ಪ್ಲಗ್ ಮೂಲಕ ವಿದ್ಯುತ್ ಉಪಕರಣಗಳಿಗೆ ಸಂಪರ್ಕ ನೀಡಲು ಬಳಸಬೇಡಿ. ಪಕ್ಕಾ ವಯರಿಂಗ್ ಮಾಡಿದ ಪ್ರಕರಣವಾದರೆ ಲೂಪಿಂಗ್ ಪದ್ಧತಿ ಅನುಸರಿಸಲು ಒತ್ತಿ ಹೇಳಿ.
- ವಯರ್ಗಳನ್ನು ಜೋಡಿಸುವಲ್ಲಿ ಬಟ್ಟೆ ಚೂರುಗಳನ್ನು ಉಪಯೋಗಿಸಬೇಡಿ. ಪ್ರತಿರೋಧಕ ಪಟ್ಟಿದಾರವನ್ನು ಉಪಯೋಗಿಸಿ.
- ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟಿ ಹಾಕಬೇಡಿ.
- ಒದ್ದೆ ನೆಲದ ಮೇಲೆ ಸಡಿಲವಾಗಿ ತಂತಿಗಳನ್ನು ಎಳೆದುಕೊಂಡು ಹೋಗಬೇಡಿ.
- ಉಪಕರಣಗಳ ಶರೀರದ ಮೇಲಿರುವ ಸ್ವಿಚ್ಚನ್ನು ಅವಲಂಬಿಸಬೇಡಿ. ಪ್ಲಗ್ಗೆ ಪ್ರತ್ಯೇಕ ಸ್ವಿಚ್ ನಿಯಂತ್ರಕವನ್ನು ಒದಗಿಸಿ.
- ಥರ್ಮೊಸ್ಟಾಟ್ ಇಲ್ಲದ ಇಸ್ತ್ರಿ ಪೆಟ್ಟಿಗೆಯನ್ನು ಸಾಕಷ್ಟು ಬಿಸಿಯಾದ ಬಳಿಕವೂ ಸ್ವಿಚ್ ಆನ್ ಇಟ್ಟು ತೆರಳಬೇಡಿ.
- ವಿದ್ಯುತ್ ಹೀಟರ್ನಲ್ಲಿ ಹಪ್ಪಳವನ್ನು ಸುಡಬೇಡಿ. ಇದರಿಂದ ಹೀಟರಿನ ವಿದ್ಯುತ್ ತಂತಿಗೆ ಬೆರಳುಗಳು ಸ್ಪರ್ಶಿಸಿ ಅಪಾಯ ಸಂಭವಿಸಬಹುದು.
- ಹೀಟರ್ನಿಂದ ಪಾತ್ರೆ ತೆಗೆಯುವ ಮುನ್ನ ಸ್ವಿಚ್ಚನ್ನು ಆರಿಸಲು ಮರೆಯಬೇಡಿ. ಹೀಟರ್ ಮೇಲೆ ಪಾತ್ರೆ ಇಟ್ಟ ಬಳಿಕವೇ ಮತ್ತೆ ಸ್ವಿಚ್ ಆನ್ ಮಾಡಿ.
- ಭತ್ತ, ಬಟ್ಟೆ ಚೀಲಗಳು, ಒಣಹುಲ್ಲು, ಇತ್ಯಾದಿಗಳನ್ನು ನಿಮ್ಮ ಸ್ಥಾವರದ ವಯರನ್ನು ಸ್ಪರ್ಶಿಸುವಷ್ಟು ಎತ್ತರಕ್ಕೆ ಪೇರಿಸಿಡಬೇಡಿ.
- ರೇಡಿಯೋ ಮತ್ತು ದೂರದರ್ಶನ ಸೆಟ್ಗಳು ಚಾಲೂ ಇದ್ದಾಗ ದಯವಿಟ್ಟು ಮಧ್ಯೆ ಕೈ ಹಾಕಬೇಡಿ. ಶುಚಿಗೊಳಿಸಬೇಕಾದಲ್ಲಿ ಉಪಕರಣದ ವಿದ್ಯುತ್ ಸಂಪರ್ಕವನ್ನು ತೆಗೆಯಿರಿ.
- ಬಲ್ಬಿಗೆ ಅತೀ ಸಮೀಪ ನಿಲ್ಲಬೇಡಿ ಮತ್ತು 3ನೇ ವ್ಯಕ್ತಿಗೆ ಸ್ಚಿಚ್ ಆನ್ ಮಾಡಲು ತಿಳಿಸಿ.
- ಮಕ್ಕಳಿಗೆ ಉಪಕರಣಗಳ ನಿಯಂತ್ರಣಗಳನ್ನು ನಿರ್ವಹಿಸಲು/ಕೈ ಹಾಕಲು ಬಿಡಬೇಡಿ.
ವಾಣಿಜ್ಯ ಗ್ರಾಹಕರಿಗೆ
ಮಾಡಿ 
- ಎಲ್ಲಾ ವಯರಿಂಗ್ ಕೆಲಸವನ್ನು ಪರವಾನಗಿ ಪಡೆದ ವಯರಿಂಗ್ ಗುತ್ತಿಗೆದಾರರಿಂದಲೇ ಮಾಡಿಸಿ.
- ವಿದ್ಯುತ್ ಕಂಬಗಳಿಗೆ ಜಾಹೀರಾತು ಫಲಕಗಳು, ಧ್ವಜಗಳು, ಇತ್ಯಾದಿಗಳನ್ನು ಕಟ್ಟಬೇಡಿ.
ಮಾಡದಿರಿ 
- ಅನುಮತಿ ಇರುವುದಕ್ಕಿಂತ ಹೆಚ್ಚು ಎತ್ತರದವರೆಗೆ ಸಾಮಾನುಗಳನ್ನು ತುಂಬಿದ ವಾಹನಗಳ ಮೇಲೆ ಪ್ರಯಾಣಿಸಬೇಡಿ. ಏಕೆಂದರೆ ಇದು ವಿದ್ಯುತ್ ಮೇಲು ತಂತಿಗಳಿಗೆ ತಾಗಿ ಪ್ರಾಣಾಂತಿಕ ಅಪಘಾತವಾಗಬಹುದು.
- ಕೊಳವೆಗಳ ತಿರುವು ಇರುವಲ್ಲಿ ಕೇವಲ ಶೇಕಡಾ 50ರಷ್ಟು ಮಾತ್ರ ಉಪಯೋಗಿಸಿ. ವಯರ್/ಕೇಬಲ್ ಗಳನ್ನು ಎಳೆಯಿರಿ.
- ಒಂದಕ್ಕೊಂದು ಸಮೀಪವಾಗಿ ಇರುವಂತೆ ನೀರಿನ ಕೊಳವೆ ಮತ್ತು ವಿದ್ಯುತ್ ಕೊಳವೆಗಳನ್ನು ಅಳವಡಿಸಬೇಡಿ.
ಕೈಗಾರಿಕಾ ಗ್ರಾಹಕರುಗಳಿಗೆ
ಮಾಡಿ 
- ಕೆಲಸ ಪ್ರಾರಂಭಿಸುವ ಮೊದಲು ಎಲ್ಲಾ ಸ್ವಿಚ್ಗಳ ಮೇಲೆ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆಂಬ ಗುರುತು ಬೋರ್ಡನ್ನು ಇಡಿ.
- ಯಾವುದೇ ಸಕ್ರ್ಯೂಟ್ ಅಥವಾ ಉಪಕರಣಗಳ್ಲಿ ಕೆಲಸ ಮಾಡುವ ಮೊದಲು ಎಲ್ಲಾ ನಿಯಂತ್ರಕ ಸ್ವಿಚ್ ಗಳನ್ನು ತೆರೆದಿಡಲಾಗಿದೆಯೇ ಮತ್ತು ಬೀಗ ಹಾಕಿದೆಯೇ ಅಥವಾ ಫ್ಯೂಸನ್ನು ತೆಗೆಯಲಾಗಿದೆÀಯೇ ಎಂದು ಖಚಿತಪಡಿಸಿಕೊಳ್ಳಿ.
- ಸಕ್ರ್ಯೂಟ್ಗಳು ನಿರುಪಯುಕ್ತ ಆಗಿವೆ ಎಂದು ರುಜುವಾತಾಗುವ ತನಕ ಚಟುವಟಿಕೆಯಿಲ್ಲಿದೆ ಎಂದು ತಿಳಿಯಿರಿ.
- ಯಾವಾಗ ಕಿಡಿಗಳುಂಟಾಗಿ ಯಾ ಸಿಡಿಯುವ ಲಕ್ಷಣಗಳು ಕಾಣಬರುತ್ತದೆಯೇ ಆಗ ನಿಮ್ಮ ಮುಖವನ್ನು ಆಚೆ ತಿರುಗಿಸಿ.
- ಎಲ್ಲಾ ತಂತಿ ಜೋಡಣೆಗಳು ಮತ್ತು ಸಂಪರ್ಕಗಳು ಭದ್ರವಾಗಿ ಮಾಡಲ್ಪಟ್ಟಿವೆಯೇ ಎಂದು ನೋಡಿಕೊಳ್ಳಿ.
- ಪ್ರಧಾನ ಕೆಲಸ ಮಾಡುವ ಮೊದಲು ಎಲ್ಲಾ ಕೇಬಲ್ಗಳನ್ನು ಪೂರ್ಣವಾಗಿ ಭೂಸಂಪರ್ಕಕ್ಕೆ ಒಳಪಡಿಸಿ.
- ರಬ್ಬರ್ ಕೈಚೀಲಗಳನ್ನು ನಿಯತಕಾಲಿಕವಾಗಿ ಪರೀಕ್ಷಿಸಿ.
- ರಬ್ಬರ್ ಚಾಪೆಯನ್ನು ವಿದ್ಯುತ್ ಸ್ವಿಚ್ ಬೋರ್ಡ್ಗಳ ಎದುರಿಗೆ ಇಡಿ.
- ಎಲ್ಲಾ ಉದ್ಯೋಗಿಗಳು ಸ್ಥಳ ಮತ್ತು ಅಗ್ನಿಶಾಮಕ ಉಪಕರಣಗಳ ಬಳಕೆ ಮಾಡುವುದನ್ನು ತಿಳಿದಿರುವರೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಬೆಂಕಿ ನೀರುನಳಿಕೆಯನ್ನು ಉಪಯೋಗಿಸುವಾಗ ಜೆಟ್ ನೀರು ಜೀವಂತ ವಿದ್ಯುತ್ ಉಪಕರಣದ ಸಂಪರ್ಕವಿರುವಲ್ಲಿಗೆ ಸರಿಯಾಗಿ ಸಂಪರ್ಕಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಪ್ರತ್ಯೇಕತೆಯ ಬಿಂದುವಿನಲ್ಲಿ ನಿರ್ಬಂಧ ಫಲಕ ವನ್ನು ಹಾಕಿ ಮತ್ತು ಕೆಲಸ ನಿರ್ವಹಿಸುವಾಗ ಫ್ಯೂಸ್ನ ಕ್ಯಾರಿಯರ್ನ್ನು ಕಳಚಿ ಹಾಕಿ.
ಮಾಡದಿರಿ 
- ನಿಯಂತ್ರಿಸುವ ಸರ್ಕಿಟಿನ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದೆ ಮತ್ತು ಅದನ್ನು ತೆರೆದಿಟ್ಟ ಬಗ್ಗೆ ಕಾರಣವನ್ನು ತಿಳಿಯದೆ ನೀವು ಸ್ಟಿಚ್ಗಳನ್ನು ಮುಚ್ಚಬೇಡಿ.
- ಯಾವುದೇ ವಿದ್ಯುತ್ ಗೇರ್ ಅಥವಾ ವಾಹಕಗಳನ್ನು ಅದು ನಿರುಪಯುಕ್ತವಾಗಿದೆ ಮತ್ತು ಭೂಸಂಪರ್ಕ ಹೊಂದಿದೆ ಎಂಬುದನ್ನು ಖಚಿತಪಡಿಸದೆ ಸ್ಪರ್ಶಿಸಬೇಡಿ ಅಥವಾ ಹಸ್ತಕ್ಷೇಪ ಮಾಡಬೇಡಿ. ಅಧಿಕ ವೋಲ್ಟೇಜಿನ ಉಪಕರಣಗಳು ಶಾಕ್ ನೀಡಬಹುದು ಅಥವಾ ಸ್ಪರ್ಶಿಸದಿದ್ದರೂ ಸಿಡಿಯಬಹುದು.
- ಬರಿಯ ಬೆರೆಳುಗಳಿಂದ ಯಾ ಕೈಯಿಂದ ಸಕ್ರ್ಯೂಟನ್ನು ಅಥವಾ ಇತರ ಪಾಳಿ ಸಲಕರಣೆಗಳನ್ನು ಅದು ಉಪಯುಕ್ತವೇ ನಿರುಪಯುಕ್ತವೇ ಎಂದು ಪರೀಕ್ಷಿಬೇಡಿ.
- ನಿಧಾನವಾಗಿ ಅಥವಾ ಅನುಮಾನದಿಂದ ಸ್ವಿಚ್ನ್ನು ಅಥವಾ ಫ್ಯೂಸನ್ನು ತೆಗೆಯಬೇಡಿ ಯಾ ಮುಚ್ಚಬೇಡಿ. ತುರ್ತಾಗಿ ನಿರ್ಧಿಷ್ಟವಾಗಿ ಮತ್ತು ಅಚಲವಾಗಿ ಅದನ್ನು ಮಾಡಿ.
- ಕ್ಷೀಣ ನಿರೋಧಕವಿರುವ ಮತ್ತು ಕಳಪೆ ವಯರನ್ನು ಉಪಯೋಗಿಸಬೇಡಿ.
- ಅವಸರ ಮಾಡಬೇಡಿ ಮತ್ತು ಅಜಾಗ್ರತೆಯಿಂದಿರಬೇಡಿ. ಇದು ಅನೇಕ ಅಪಘಾತಗಳಿಗೆ ಕಾರಣವಾಗಬಹುದು.
- ಅಗ್ನಿ ಆಕಸ್ಮಿಕದಲ್ಲಿ ಜೀವಂತ ವಿದ್ಯುತ್ ಉಪಕರಣದ ಮೇಲೆ ನೀರನ್ನು ಎಸೆಯಬೇಡಿ.
- ಅಗ್ನಿಶಾಮಕ ಉಪಕರಣಗಳು ಆ ಉದ್ದೇಶಕ್ಕೆ ಸೂಕ್ತವಾಗಿದೆ ಎಂದು ಸ್ಪಷ್ಟವಾಗಿ ಗುರುತಿಸಲ್ಪಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ವಿದ್ಯುತ್ ಉಪಕರಣಗಳ ಮೇಲೆ ಬಳಸಬೇಡಿ.
- ಸುರಕ್ಷಾ ಬೆಲ್ಟ್ ಮತ್ತು ರಬ್ಬರ್ ಕೈಚೀಲಗಳು ಇಲ್ಲದೆ ಮತ್ತು ನೇರ ಕಾರ್ಯಾಚರಣೆಯ ಬಳಿ ಸೂಕ್ತ ವ್ಯಕ್ತಿ ಹತ್ತಿರದಲ್ಲಿ ನೆಲದಲ್ಲಿ ನಿಂತು ಎಚ್ಚರಿಕೆ ಕೊಡದಿರುವಂತಿದ್ದರೆ, ವಿದ್ಯುತ್ ಹರಿಯುತ್ತಿರುವಾಗ ಕಂಬದ ಮೇಲೆ ಅಥವಾ ಎತ್ತರಿಸಿದ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಡಿ.
- ಲ್ಯಾಶಿಂಗ್ ಹಗ್ಗವಿಲ್ಲದ ಏಣಿಯನ್ನು ಬಳಸಬೇಡಿ. ಪರ್ಯಾವಾಗಿ ಇನ್ನೊಬ್ಬ ವ್ಯಕ್ತಿ ಏಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿರಬೇಕು.
- ಬೇಲಿಯಲ್ಲಿ ವಿದ್ಯುತ್ ಹರಿಸಬೇಡಿ. 2003ರ ಭಾರತೀಯ ವಿದ್ಯುತ್ ಕಾಯಿದೆಯನ್ವಯ ಬೇಲಿಗೆ ವಿದ್ಯುತ್ ಹರಿಸುವುದು ಒಂದು ಅಪರಾಧವಾಗಿದೆ.