ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಸಂಗ್ರಹವನ್ನು ಹೆಚ್ಚಿಸುವುದಕ್ಕಾಗಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಹಕರುಗಳಿಂದ ಕಂದಾಯ ವಸೂಲಿ ಮಾಡಲು ಜಿವಿಪಿ ಅಂದರೆ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು
- ಮಾಪಕ ಓದುವುದು, ಬಿಲ್ ಮಾಡಿ ನೀಡುವುದು ಮತ್ತು ಕಂದಾಯ ಸಂಗ್ರಹ.
- ಸಂಗ್ರಹವಾದುದನ್ನು ವಿದ್ಯುತ್ ಸಂಸ್ಥೆಗೆ ಡಿಪಾಸಿಟ್ ಮಾಡುವುದು.
- ದೂರುಗಳನ್ನು ನೊಂದಾಯಿಸಿ ವಿದ್ಯುತ್ ಸಂಸ್ಥೆಗೆ ನೀಡುವುದು.
- ಅಲ್ಪ ವಿದ್ಯುತ್ ಒತ್ತಡದ ಗ್ರಾಹಕರು ಅಂದರೆ ಗೃಹ, ಸರ್ವ ವಿದ್ಯುತ್ ಗೃಹ, ವಾಣಿಜ್ಯ, 40 ಅಶ್ವಶಕ್ತಿಯೊಳಗಿನ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳ (ನೀರು ಸರಬರಾಜು, ಬೀದಿ ದೀಪಗಳನ್ನು ಹೊರತುಪಡಿಸಿ) ಸಮಸ್ಯೆಗಳನ್ನು ಸುಗಮವಾಗಿ ಇತ್ಯರ್ಥಪಡಿಸುವಲ್ಲಿ ವಿದ್ಯುತ್ ಸಂಸ್ಥೆಯೊಂದಿಗೆ ಸಹಕರಿಸುವುದು.
- ನಿಯಮಿತ ಆಧಾರದ ಮೇಲೆ ಉಪಯುಕ್ತತೆಗೆ ಕ್ಷೇತ್ರ ವಾಸ್ತವತೆಗಳ ಬಗ್ಗೆ ಫೀಡ್ ಬ್ಯಾಕ್ ನೀಡುವುದು.
ಗ್ರಾಮ ವಿದ್ಯುತ್ ಪ್ರತಿನಿಧಿಗಳಾಗಲು ಅರ್ಹತಾ ಅಳತೆಗೋಲುಗಳು
- ಪಂಚಾಯತ್ ಪ್ರದೇಶದಲ್ಲಿ ಆತ ವಾಸವಾಗಿರಬೇಕು.
- ಅರ್ಜಿ ಹಾಕುವ ದಿನಾಂಕದಂದು ಆತನ ಪ್ರಾಯ 18 ರಿಂದ 38 ವರ್ಷದೊಳಗಿರಬೇಕು.
- ಕನಿಷ್ಟ ವಿದ್ಯಾರ್ಹತೆಗಳು:- ಐ.ಟಿ.ಐ ಅಥವಾ ಯಾವುದೇ ಡಿಪ್ಲೊಮಾ ಅಥವಾ ಎಸ್.ಎಸ್.ಎಲ್.ಸಿ./ಪಿಯುಸಿಯೊಂದಿಗೆ ಬಿಲ್ ಮಾಡುವ/ಸಂಗ್ರಹಿಸುವ ಅನುಭವ ಹೊಂದಿರಬೇಕು.
- ಕೆಲಸದ ಅವಧಿ ನಿಶ್ಚಿತಗೊಳಿಸಲು 15 ದಿನದ ಕಂದಾಯ ಸಂಗ್ರಹದ ಮೊತ್ತವನ್ನು ಆತ ಬ್ಯಾಂಕ್ ಗ್ಯಾರಂಟಿಯನ್ನಾಗಿ ನೀಡಬೇಕು.
- ಅವರು ಮೆಸ್ಕಾಂನ ಉದ್ಯೋಗಿಯಾಗುವುದಿಲ್ಲ.
ಗ್ರಾಮ ವಿದ್ಯುತ್ ಪ್ರತಿನಿಧಿಗೆ ನೀಡಲ್ಪಡುವ ಪ್ರೋತ್ಸಾಹಧನ
- ಗ್ರಾಮ ವಿದ್ಯುತ್ ಪ್ರತಿನಿಧಿಯೊಂದಿಗೆ ಮೆಸ್ಕಾಂ ತಿಳುವಳಿಕೆ ಪತ್ರಕ್ಕೆ ಮೆಸ್ಕಾಂ ಸಹಿ ಮಾಡುತ್ತದೆ.
- ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ ಬಳಿಕ ಆಯ್ಕೆಯಾದ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ 15 ದಿನಗಳ ತರಬೇತಿ ನೀಡಲಾಗುವುದು.
- ಮೆಸ್ಕಾಂ ನಿಗದಿಪಡಿಸಿದ ತಳಹದಿ ರೇಖೆಯ ತನಕ ಮೊತ್ತ ಸಂಗ್ರಹಿಸಿದ ಗ್ರಾಮ ವಿದ್ಯುತ್ ಪ್ರತಿನಿಧಿಗೆ ಮಾಸಿಕ ಮೊತ್ತವನ್ನು ನೀಡಲಾಗುವುದು.
- ಆದಾಗ್ಯೂ, ಅವನ/ಅವಳ ಗ್ರಾಮ ಪಂಚಾಯತ್ ಕ್ಷೇತ್ರದ ಎಲ್ಲಾ ಎಲ್.ಟಿ. ಗ್ರಾಹಕರುಗಳಿಂದ ಅಂದರೆ ಎಲ್.ಟಿ.-1, ಎಲ್.ಟಿ.-2, ಎಲ್.ಟಿ.-3, ಎಲ್.ಟಿ.-4, ಮತ್ತು 40 ಅಶ್ವಶಕ್ತಿಗಿಂತ ಕಡಿಮೆಯಿರುವ ಎಲ್.ಟಿ.-5 (ಮೆಸ್ಕಾಂನ ನಗದು ಸ್ವೀಕರಣಾ ಕೇಂದ್ರಗಳಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಸೇರಿಸಿದಂತೆ) ದರಗಳಲ್ಲಿ ಸಂಗ್ರಹಿಸಿದ ಮೊತ್ತವು ಮೆಸ್ಕಾಂ ನಿಗದಿಪಡಿಸಿರುವ ತಳಹದಿಗೆರೆಯನ್ನು ಮೀರಿದಲ್ಲಿ, ಅಂತಹ ಗ್ರಾಮ ವಿದ್ಯುತ್ ಪ್ರತಿನಿಧಿಗೆ ಆತ/ಅವಳು ನೀಡಿದ ಸೇವೆಗಾಗಿ ಮೊತ್ತದ ಪ್ರೋತ್ಸಾಹಧನವನ್ನು ನೀಡಲಾಗುವುದು.
- ಪಂಚಾಯಿತಿ ಕ್ಷೇತ್ರದಲ್ಲಿ ತಿಂಗಳಿಗೆ ನಿಗದಿಪಡಿಸಿದ ತಳಹದಿ ಮೊತ್ತವನ್ನು ತಲುಪುವಲ್ಲಿ ವಿಫಲರಾಗಿ ಯಾವುದೇ ತಿಂಗಳಲ್ಲಿ ಕಡಿಮೆ ಮೊತ್ತ ಸಂಗ್ರಹಸಿದ ಪಕ್ಷದಲ್ಲಿ ದಂಡವನ್ನು ಅವರಿಗೆ ನೀಡುವ ತಿಂಗಳ ಪಾವತಿ ಮೊತ್ತದಿಂದ ಕಡಿತಗೊಳಿಸಲಾಗುವುದು. ಈ ರಕಮನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಮತ್ತು ಲೆಕ್ಕ ಚುಕ್ತಾ ಮಾಡುವ ಸಮಯದಲ್ಲಿ ವಿತರಿಸಲಾಗುವುದು.