MESCOM

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ಗ್ರಾಹಕರುಗಳಿಗೆ ಮಾರ್ಗದರ್ಶನ

ಗ್ರಾಹಕರುಗಳಿಗೆ ಮಾರ್ಗದರ್ಶನ

ಗೃಹಬಳಕೆದಾರರಿಗೆ
 • ವಿದ್ಯುತ್ ದೀಪಗಳು ಮತ್ತು ಉಪಕರಣಗಳು ಬಳಕೆಯಲ್ಲಿ ಇಲ್ಲದಿರುವಾಗಿ ಸ್ವಿಚ್ಚನ್ನು ಆರಿಸಿರಿ.
 • ಹಗಲಿನಲ್ಲಿ ಹೆಚ್ಚಾಗಿ ಸೂರ್ಯನ ಬೆಳಕನ್ನೇ ಬಳಸಿ ಮತ್ತು ಕೃತಕ ಬೆಳಕಿನ ಉಪಯೋಗವನ್ನು ತಪ್ಪಿಸಿ.
 • ದೀಪಗಳನ್ನು ಮತ್ತು ಜೋಡಣೆಯನ್ನು ಶುಚಿಯಾಗಿಟ್ಟು ಹೆಚ್ಚು ಬೆಳಕನ್ನು ಪಡೆಯಿರಿ.
 • ಗೋಡೆ ಮತ್ತು ಛಾವಣಿಗಳನ್ನು ಕಡಿಮೆ ಬಣ್ಣದಿಂದ ಪೈಂಟ್ ಮಾಡಿ.
 • ಇನ್‌ಕೆಂಡಿಸೆಂಟ್ ಬಲ್ಬ್ ಗಳಿಗೆ ತಗಲುವ ವಾಟೇಜ್ ಕಡಿಮೆ ಮಾಡಲು ಅವನ್ನು ಬದಲಿಸಿ ಫ್ಲೋರೋಸೆಂಟ್ ಟ್ಯೂಬ್‌ಗಳನ್ನು ಹಾಕಿ, ಆದಷ್ಟೂ ಸಿ.ಎಪ್.ಎಲ್.ಟ್ಯೂಬ್ ಗಳನ್ನು ಆಯ್ಕೆ ಮಾಡಿ.
 • ಟ್ಯೂಬ್ ದೀಪಗಳು ಕಡಿಮೆ ವಿದ್ಯುತ್ತನ್ನು ಬಳಸುತ್ತವೆ, ಹೆಚ್ಚು ಬೆಳಕನ್ನು ನೀಡುತ್ತವೆ ಮತ್ತು ಬಾಳಿಕೆ ಅವಧಿಯೂ ಹೆಚ್ಚು.
 • ಟ್ಯೂಬ್ ದೀಪಗಳೊಂದಿಗೆ ಕೆಪಾಸಿಟರ್‌ಗಳನ್ನಳವಡಿಸಿ.
 • ಅನಗತ್ಯವಾಗಿ ಫ್ರಿಜ್ಜಿನ ಬಾಗಿಲುಗಳನ್ನು ತೆರೆದಿಡಬೇಡಿ.
 • ಕಂಡೆಂಸರ್ ಕಾಯಿಲ್‌ಗಳನ್ನು ಮತ್ತು ಗ್ರಿಲ್‌ಗಳನ್ನು ಶುಚಿಯಾಗಿಡಿ.
 • ವಿದ್ಯುತ್ ಒಲೆ ಹೀಟರ್ ಮತ್ತು ಇಸ್ತ್ರಿ ಪೆಟ್ಟಿಗೆ ಇತ್ಯಾದಿಗಳಿಗೆ ಥರ್ಮೊಸ್ಟಾಟ್ ನಿಯಂತ್ರಕ ಸ್ವಿಚ್‌ಗಳನ್ನು ಬಳಸಿ.
 • ಮನೆಯಿಂದ ತುಂಬಾ ಅವಧಿಗೆ ಹೊರ ಹೋಗುವುದಿದ್ದಲ್ಲಿ ಮೈನ್ ಸ್ವಿಚ್ಚನ್ನು ಆರಿಸಿರಿ.
 • ಆಂತರಿಕ ವಯರಿಂಗ್ ಐಎಸ್‌ಐ ಗುರುತಿನ ಸಾಮಗ್ರಿಗಳನ್ನೇ ಬಳಸಿ.
 • ಶೀತಲ ಯಂತ್ರಗಳು ಮತ್ತು ಹವಾನಿಯಂತ್ರಿತ ಯಂತ್ರಗಳನ್ನು ಬೇರೆ ಬೇರೆಯಾಗಿ ಬಳಸಿ.
 • ಮೋಟಾರ್‌ಗಳು ಮತ್ತು ಮೋಟಾರ್ ಡ್ರೈವ್ ಗಳಿಗೆ ನಿರಂತರವಾಗಿ ಎಣ್ಣೆ ಹಾಕಿ ಜಾರುವಂತೆ ಮಾಡಿ, ಘರ್ಷಣೆಯನ್ನು ಕಡಿಮೆ ಮಾಡಿ.
 • ನೀರಾವರಿ ಪಂಪು ಸೆಟ್‌ಗಳಿಗೆ ದಕ್ಷತೆಯಿಂದ ಇಂಧನ ಬಳಸುವ ಘರ್ಷಣೆರಹಿತ ಉಪಕರಣಗಳನ್ನು ಬಳಸಿ.
ವಾಣಿಜ್ಯ ಸಂಸ್ಥೆಗಳಿಗೆ
 • ಸೂರ್ಯನ ಬೆಳಕು ಉಚಿತವಾಗಿದೆ. ಸಾಧ್ಯವಾದಷ್ಟು ಹೆಚ್ಚಿಗೆ ಅದನ್ನೇ ಬಳಸಿ.
 • ಎಲ್ಲೆಲ್ಲಿ ಸಾಧ್ಯವೋ, ಅಲ್ಲೆಲ್ಲಾ ಭಾಗ ಮಾಡುವುದನ್ನು ಕಡಿಮೆ ಮಾಡಿ.
 • ಅಲಂಕಾರಿಕ ಮತ್ತು ಮುಚ್ಚುಮರೆ ಇರುವ ದೀಪಗಳ ಉಪಯೋಗವನ್ನು ತಪ್ಪಿಸಿ.
 • ಸೂಕ್ತ ಗಾತ್ರದ ಸಾಮಗ್ರಿ ಉಪಯೋಗಿಸಿ ವಯರಿಂಗ್ ಮಾಡಿ ಇಂಧನ ನಷ್ಟ ಮತ್ತು ಬೆಂಕಿ ಆಕಸ್ಮಿಕಗಳನ್ನು ತಪ್ಪಿಸಿ.
 • ಶೀತಲ ಮತ್ತು ಹವಾನಿಯಂತ್ರಿತ ಯಂತ್ರಗಳನ್ನು ಬೇರೆ ಬೇರೆಯಾಗಿ ಬಳಸಿ.
 • ಕಟ್ಟಡ ಉಪೊಯೋಗದಲ್ಲಿಲ್ಲದಾಗ ಭದ್ರತಾ ದೀಪಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೀಪಗಳನ್ನು ಆರಿಸಿ.
ಕೈಗಾರಿಕಾ ಬಳಕೆದಾರರಿಗೆ
 • ಮೋಟಾರ್‌ಗಳು ತಂಪಾಗಿ ಇರಲು ಅನುಕೂಲವಾಗುವಂತೆ ಶುಚಿಯಾಗಿಡಬೇಕು. ಇಂಡಕ್ಷನ್ ಮೋಟಾರುಗಳು ಮತ್ತು ಎಲೆಕ್ಟಾನಿಕ್ ಸ್ಟಾರ್ಟರ್‌ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಅವುಗಳು ಹೊರಹರಿವಿನ ದರಕ್ಕಿಂತ ಕಡಿಮೆ ಮಟ್ಟದಲ್ಲಿದ್ದು ಮೋಟಾರುಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಶೇಕಡಾ 50 ಕ್ಕಿಂತ ಕಡಿಮೆ ಹೊರೆಯಲ್ಲಿ ಮೋಟಾರು ಚಾಲನೆ ಮಾಡಿ ಇಂಧನ ಉಳಿತಾಯವಾಗುವುದು ಔಚಿತ್ಯಪೂರ್ಣವಾಗಿದೆ.
 • ಮೋಟಾರ್‌ನ ತುದಿಗಳಲ್ಲಿ ಶಂಟ್ ಕೆಪಾಸಿಟರ್‌ಗಳನ್ನು ಬಳಸಿರಿ ಮತ್ತು ಕೆವಿಎ ವೆಚ್ಚ ಕಡಿಮೆ ಮಾಡಿ ಮತ್ತು ಮೋಟಾರಿಗೆ ಹಾನಿಯಾಗುವುದನ್ನು ತಪ್ಪಿಸಿ.
 • ಸಾಧ್ಯವಾದಷ್ಟು ಮಟ್ಟಿಗೆ ಮೋಟಾರಿನ ಸಮೀಪ ಮೈನ್ ಸ್ವಿಚ್ ಅಳವಡಿಸಿ, ಇದರಿಂದ ಉಪಯೋಗದ ಬಳಿಕ ತುರ್ತಾಗಿ ಸರಬರಾಜಿನ ಸ್ಷಿಚ್ಚನ್ನು ನಾವು ಆರಿಸಬಹುದು.
 • ಮೋಟಾರುಗಳು ಮತ್ತು ಮೋಟಾರ್ ಡ್ರೈವ್ ಗಳಿಗೆ ನಿರಂತರವಾಗಿ ಎಣ್ಣೆ ಹಾಕಿ ಜಾರುವಂತೆ ಮಾಡಿ ಘರ್ಷಣೆಯನ್ನು ಕಡಿಮೆ ಮಾಡಿ.
 • ವ್ಯವಸ್ಥಿತ ಅಂತರಗಳಲ್ಲಿ ರಾಟೆಗಳನ್ನು ಮತ್ತು ಪಟ್ಟಿಗಳನ್ನು ಬಿಗಿಯಾಗಿ ಇರುವಂತೆ ನೋಡಿಕೊಳ್ಳಿ. ಇದರಿಂದ ಕಾಣದ ದೋಷದಿಂದ ಉಂಟಾಗುವ ವಿದ್ಯುತ್ ನಷ್ಟವನ್ನು ಕಡಿಮೆ ಮಾಡಬಹುದು.
 • ಹೊರೆಗೆ ಎಷ್ಟು ಸಾಧ್ಯವೋ ಅಷ್ಟು ಸಮೀಪದಲ್ಲಿ ಮೋಟಾರನ್ನು ಅಳವಡಿಸಿ.
 • ಕಡಿಮೆ ಹೊರೆಯ 3 ಫೇಸಿನ ಯಾವುದೇ ಮೋಟಾರುಗಳ ವೈಂಡಿAಗ್‌ಗಳನ್ನು ಡೆಲ್ಟಾ ಸಂಪರ್ಕದ ಬದಲು ಸ್ಟಾರ್‌ಗಳಿಗೆ ಮರುಸಂಪರ್ಕಗೊಳಿಸಬಹುದು. ಇದು ವೈಂಡಿಂಗ್ ದಾದ್ಯಂತ ಶೇಕಡಾ 58ಕ್ಕಿಂತ ಕಡಿಮೆ ಪೂರ್ತಿ ಹೊರೆಯಲ್ಲಿ ಚಲಿಸುವ ಮೋಟಾರುಗಳಿಗೆ ಉಪಯೋಗವಾಗಲಿದೆ. ಚಿಕ್ಕ ಮೋಟಾರ್‌ಗಳನ್ನು ಅಗ್ಗದ ಬೆಲೆಯಲ್ಲಿ ಪಡೆಯುವುದು ಒಂದು ಆಯ್ಕೆಯಾಗಿದ್ದು ನಡೆಸಿದ ಅಧ್ಯಯನಗಳಿಂದ ಸ್ಟಾರ್ ಸಂಪರ್ಕಿತ ಮೋಟಾರುಗಳ ಮತ್ತು ಪ್ರಮಾಣಬದ್ಧ ಮೋಟಾರುಗಳ ಮಧ್ಯೆ ಕಾರ್ಯನಿರ್ವಹಣೆಯನ್ನು ಪರಿಶೀಲಿಸದಾಗ ಈ ಮೋಟಾರುಗಳು ಅತ್ಯಂತ ಕನಿಷ್ಠತಮವಾಗಿದೆ.
 • ಹಗಲಿನ ಬೆಳಕನ್ನೇ ಹೆಚ್ಚಾಗಿ ಉಪಯೋಗ ಮಾಡಿ.
 • ನಿಮ್ಮ ಅವಶ್ಯಕತೆಗನುಗುಣವಾಗಿ ಮೋಟಾರ್ ಹೊಂದಿಕೊಳ್ಳಿ. ಭೀಮಗಾತ್ರದ ಮೋಟಾರುಗಳು ಇಂಧನವನ್ನು ಹಾಳು ಮಾಡುತ್ತದೆ. ಅತ್ಯಂತ ದಕ್ಷತೆಯಿರುವ ಮೋಟಾರುಗಳನ್ನೇ ಬಳಸಿ.
 • ನಿತ್ರಾಣವಾದ ಬೇರಿಂಗುಗಳನ್ನು ಕೂಡಲೇ ಬದಲಾಯಿಸಿ ಮತ್ತು ಸಕಾಲದಲ್ಲಿ ದುರಸ್ತಿಗೊಳಿಸಿ.
 • ಐ.ಎಸ್‌.ಐ ಗುರುತಿರುವ ಮೋಟಾರುಗಳನ್ನೇ ಉಪಯೋಗಿಸಿ.
 • ಸರಿಯಾದ ಸೈಜಿನ ವಯರನ್ನು ಉಪಯೋಗಿಸಿದ್ದರೂ, ಪ್ರತೀ ಬಾರಿ ಮೋಟರನ್ನು ರಿವೈಂಡ್ ಮಾಡಿಸಿದಾಗ ಶೇಕಡಾ 2 ರಿಂದ ಶೇಕಡಾ 10 ರಷ್ಟು ಸಾಮರ್ಥ್ಯ ಕುಗ್ಗುತ್ತದೆ. ಸರಾಸರಿ ಸುಟ್ಟ ಮೋಟಾರಿನ ಮತ್ತು ರಿವೈಂಡಿಂಗ್ ಮಾಡಿದ ಮಧ್ಯೆ ಸ್ಟೀಲ್ ಲ್ಯಾಮಿನೇಶನ್‌ಗಳಿಗಾದ ಹಾನಿಯನ್ನು ಗಮನಿಸಿದಾಗ ಶೇಕಡಾ 5 ರಷ್ಟು ಸಾಮರ್ಥ್ಯ ಕುಗ್ಗಿದುದನ್ನು ಕಾಣಬಹುದು.
ನೀರಾವರಿ ಪಂಪುಸೆಟ್‌ಗಳಿಗೆ
 • ಕಡಿಮೆ ಅಡ್ಡಿ ಮಾಡುವ ಫುಟ್ ವಾಲ್ವ್ ಗಳು ಶೇಕಡಾ 10 ರಷ್ಟು ವಿದ್ಯುತ್ತನ್ನು ಉಳಿಸುತ್ತದೆ.
 • ಕಠಿಣ ಪಿ.ವಿ.ಸಿ. ಸಕ್ಷನ್ ಕೊಳವೆಗಳು ಶೇಕಡಾ 10 ರಷ್ಟು ವಿದ್ಯುತ್ತನ್ನು ಉಳಿಸುತ್ತವೆ.
 • ಪಂಪ್ ಮತ್ತು ಮೋಟಾರಿನ ಸೂಕ್ತ ಪಂಕ್ತೀಕರಣವು ವಿದ್ಯುತ್ತನ್ನು ಪಡೆಯಲು 3 ಮೀಟರಿನ ಅಂತರದೊಳಗೆ ಪಂಪನ್ನು ಅಳವಡಿಸಬೇಕು.
 • ಪ್ರಮುಖ ಮತ್ತು ವಿಸರ್ಜನಾ ಅವಶ್ಯಕತೆಗಳಿಗಳಿಗನುಗುಣವಾಗಿ ಪಂಪುಸೆಟ್‌ಗಳನ್ನು ಹೊಂದಿಸಿದಲ್ಲಿ ಶೇಕಡಾ 25ಕ್ಕೂ ಹೆಚ್ಚು ವಿದ್ಯುತ್ ಉಳಿತಾಯವಾಗುತ್ತದೆ.
 • ದೊಡ್ಡ ಕೊಳವೆಗಳು ಶೇಕಡಾ 15 ರಷ್ಟು ವಿದ್ಯುತ್ತನ್ನು ಉಳಿಸುತ್ತವೆ.
 • ನಿಮ್ಮ ಅವಶ್ಯಕತೆಗಳಿಗೆ ಅನುರೂಪವಾದ ಮೋಟಾರ್‌ಗಳನ್ನು ಅಳವಡಿಸಿ. ಬೃಹತ್ ಗಾತ್ರದ ಮೋಟಾರುಗಳು ವಿದ್ಯುತ್ತನ್ನು ಹಾಳು ಮಾಡುತ್ತವೆ. ಕಾರ್ಯದಕ್ಷತೆ ಇರುವ ಮೋಟಾರುಗಳನ್ನು ಉಪಯೋಗಿಸಿ.
 • ಆದಷ್ಟೂ ಮಟ್ಟಿಗೆ ನೆಲಮಟ್ಟಕ್ಕೆ ಸಮೀಪದಲ್ಲಿ ನೀರು ಹೊರ ಹೋಗುವ ಕೊಳವೆಗಳನ್ನು ಇಡಿ.
 • ವೋಲ್ಟೇಜ್ ಸ್ಥಿರವಾಗಿರಲು ಮತ್ತು ಮೋಟಾರಿಗೆ ಹಾನಿ ತಪ್ಪಿಸಲು ಮೋಟಾರಿನ ತುದಿಗಳಲ್ಲಿ ಶಂಟ್ ಕೆಪಾಸಿಟರ್ ಅಳವಡಿಸಿ.
 • ಐ.ಎಸ್.ಐ. ಗುರುತಿನ ಮತ್ತು ಐ.ಎಸ್.ಐ. ಮಟ್ಟದ ಮೋಟಾರ್‌ಗಳನ್ನೇ ಉಪಯೋಗಿಸಿ.