MESCOM

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ನಮ್ಮ ಬಗ್ಗೆ

ನಮ್ಮ ಬಗ್ಗೆ

map

ಅಭಿವೃದ್ಧಿಯ ಪಥದಲ್ಲಿ ವಿದ್ಯುಚ್ಛಕ್ತಿಯೂ ಒಂದು ಅಗತ್ಯದ ಸಂಪನ್ಮೂಲವಾಗಿದೆ. ಯಾವುದೇ ಮುಂದುವರಿಯುತ್ತಿರುವ ಸಮಾಜಕ್ಕೆ ಒಂದು ದಕ್ಷ, ನಂಬಿಕಸ್ಥ ಮತ್ತು ಸುಸಂಘಟಿತ ಹಾಗೂ ಗುಣಮಟ್ಟದ ವಿದ್ಯುತ್ ನೊಂದಿಗೆ ಗುಣಾಧಾರಿತ ಸೇವೆ ನೀಡಬಲ್ಲ ವಿದ್ಯುತ್ ರಂಗ ಅತ್ಯವಶ್ಯಕ. ಕರ್ನಾಟಕ ರಾಜ್ಯದಲ್ಲಿ ಹಿಂದೆ ವಿದ್ಯುತ್ ಕ್ಷೇತ್ರವನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೋಡಿಕೊಳ್ಳುತ್ತಿತ್ತು. 1999ರಲ್ಲಿ ರಾಜ್ಯ ಸರ್ಕಾರವು ಮಂಡಳಿಯನ್ನು ಎರಡು ಕಂಪೆನಿಗಳನ್ನಾಗಿ ವಿಭಜಿಸಿತು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ. 1999ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ಸ್ಥಾಪಿಸಲಾಯಿತು. ಸುಧಾರಣೆಯ ಮುಂದಿನ ಹಂತದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ವಹಿಸುತ್ತಿದ್ದ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಬೇರ್ಪಡಿಸಿ ನಾಲ್ಕು ವಿದ್ಯುತ್ ಸರಬರಾಜು ಕಂಪೆನಿಗಳನ್ನು 2002ರ ಜೂನ್ ತಿಂಗಳಲ್ಲಿ ರಚಿಸಲಾಯಿತು. ಈ ರೀತಿ ರಚಿತವಾದ ಕಂಪೆನಿಗಳಲ್ಲಿ ಕೇಂದ್ರಸ್ಥಾನ ಮಂಗಳೂರನ್ನು ಹೊಂದಿರುವ ಮೆಸ್ಕಾಂ ಕೂಡಾ ಒಂದು. ಸರಬರಾಜು ಚಟುವಟಿಕೆಗಳ ವಿಕೇಂದ್ರಿಕರಣದ ನಿಟ್ಟಿನಲ್ಲಿ ಜೂನ್ 2005ರಲ್ಲಿ ಮತ್ತೆ ಮೆಸ್ಕಾಂನಿಂದ ಸೆಸ್ಕೊ ಎಂಬ ಇನ್ನೊಂದು ಕಂಪೆನಿಯನ್ನು ರೂಪಿಸಲಾಯಿತು.

ಮೆಸ್ಕಾಂ ಕರ್ನಾಟಕದ ಈ ಕೆಳಗೆ ತಿಳಿಸಿದ ನಾಲ್ಕು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದೆ.
• ದಕ್ಷಿಣ ಕನ್ನಡ
• ಉಡುಪಿ
• ಶಿವಮೊಗ್ಗ
• ಚಿಕ್ಕಮಗಳೂರು

ಮೆಸ್ಕಾಂ ವ್ಯಾಪ್ತಿಯ ಮಂಗಳೂರಿನಲ್ಲಿ ಒಂದು ಕಾರ್ಯ ಮತ್ತು ಪಾಲನಾ ವಲಯ ಕಛೇರಿ ಇದ್ದು ಮುಖ್ಯ ಇಂಜಿನಿಯರ್(ವಿ) ಇವರು ಮುಖ್ಯಸ್ಥರಾಗಿದ್ದಾರೆ. ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳಲ್ಲಿ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಗಳಿದ್ದು ಅಧೀಕ್ಷಕ ಇಂಜಿನಿಯರ್(ವಿ) ಮುಖ್ಯಸ್ಥರಾಗಿದ್ದಾರೆ.

ಮೆಸ್ಕಾಂ 13 ಕಾರ್ಯ ಮತ್ತು ಪಾಲನಾ ವಿಭಾಗಗಳು ಮತ್ತು 61 ಕಾರ್ಯ ಮತ್ತು ಪಾಲನಾ ಉಪ-ವಿಭಾಗಗಳನ್ನು ಹೊಂದಿದೆ.

ಮೆಸ್ಕಾಂ ನ ಅಂಕಿ ಅಂಶ ವಿವರಗಳು (29.02.2020 ರಲ್ಲಿ ಇದ್ದಂತೆ)

ಕ್ರ.ಸಂ
ನಿಯತಾಂಕಗಳು
ಮೌಲ್ಯ
1
ವಿಸ್ತೀರ್ಣ 24,049 ಚ.ಕಿ.ಮೀ
2
ಜಿಲ್ಲೆಗಳು 4 ಸಂಖ್ಯೆ
3
ಜನಸಂಖ್ಯೆ (2011ರ ಜನಗಣತಿಯಂತೆ) 61 ಲಕ್ಷ
4
ವೃತ್ತಗಳು 4 ಸಂಖ್ಯೆ
5
ವಿಭಾಗಗಳು 13 ಸಂಖ್ಯೆ
6
ಉಪ-ವಿಭಾಗಗಳು 61 ಸಂಖ್ಯೆ
7
ಶಾಖಾ ಕಛೇರಿಗಳು 238 ಸಂಖ್ಯೆ
8
ಅಕೌಂಟಿಂಗ್ 10 ಸಂಖ್ಯೆ
9
ನಾನ್ ಅಕೌಂಟಿಂಗ್ 228 ಸಂಖ್ಯೆ
10
33 ಕೆ.ವಿ. ಲೈನಿನ ಉದ್ದ 855 ಕಿ.ಮೀ
11
ಹೆಚ್.ಟಿ. (11 ಕೆ.ವಿ.) ಮಾರ್ಗ 41,235 ಕಿ.ಮೀ
12
ಎಲ್.ಟಿ ಮಾರ್ಗ 84,963 ಕಿ.ಮೀ
13
ವಿತರಣಾ ಪರಿವರ್ತಕಗಳು 81,381 ಸಂಖ್ಯೆ

ಮೆಸ್ಕಾಂ ವಿತರಣಾ ಜಾಲ ಹಾಗೂ ಗ್ರಾಹಕರ ಪಾರ್ಶ್ವಾವಲೋಕನ (29.02.2020 ರಲ್ಲಿ ಇದ್ದಂತೆ)

ಕ್ರ.ಸಂ
ವಿವರಗಳು
ಸ್ಥಾವರಗಳು
1
ಒಟ್ಟು ಗ್ರಾಹಕರ 24,37,943 ಸಂಖ್ಯೆ
2
ಹೆಚ್.ಟಿ. ಗ್ರಾಹಕರು 2,251 ಸಂಖ್ಯೆ
3
ಗೃಹ/ಸರ್ವ ಗೃಹ ವಿದ್ಯುತ್ 15,92,923 ಸಂಖ್ಯೆ
4
ವಾಣಿಜ್ಯ 2,19,860 ಸಂಖ್ಯೆ
5
ನೀರಾವರಿ ಪಂಪುಸೆಟ್ಟುಗಳು 3,47,505 ಸಂಖ್ಯೆ
6
ಎಲ್.ಟಿ. ಕೈಗಾರಿಕೆಗಳು 32,254 ಸಂಖ್ಯೆ
7
ಕುಡಿಯುವ ನೀರಿನ ಸ್ಥಾವರಗಳು 16,000 ಸಂಖ್ಯೆ
8
ವಿದ್ಯುದ್ವೀಪಗಳ ಸ್ಥಾವರಗಳು 24,575 ಸಂಖ್ಯೆ
9
33 ಕೆ.ವಿ ಉಪಕೇಂದ್ರಗಳು 41 ಸಂಖ್ಯೆ
10
ಉಪಕೇಂದ್ರಗಳ ಸಾಮರ್ಥ್ಯ (33/11 ಕೆ.ವಿ ) 395 ಎಂವಿಎ
11
2018-19ನೇ ಸಾಲಿನಲ್ಲಿ ಒಟ್ಟು ಕಂದಾಯ ಸಂಗ್ರಹ ರೂ. 3,34,002.19 ಲಕ್ಷಗಳು
12
2019-20ನೇ ಸಾಲಿನಲ್ಲಿ ಒಟ್ಟು ಕಂದಾಯ ಸಂಗ್ರಹ (ಫೆಬ್ರವರಿ 2020 ರವರೆಗೆ) ರೂ. 3,30,133.93 ಲಕ್ಷಗಳು
13
ಮಂಜೂರಾದ ಖಾಯಂ ಹುದ್ದೆಗಳು 9,274 ಸಂಖ್ಯೆ
14
ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು 5,410 ಸಂಖ್ಯೆ